ಕರಿಬಸವ ದೇಶಿಕೇಂದ್ರ1 : ಸು. 1200-40. ಶ್ರೀಶೈಲ ಪಂಡಿತಾರಾಧ್ಯ ಸೂರ್ಯ ಸಿಂಹಾಸನವನ್ನು ಅಲಂಕರಿಸಿದ್ದ ಯತಿ. ಗುರು ಚಂದ್ರ ಗುಂಡ ದೇಶಿಕೇಂದ್ರ. 1235ರಲ್ಲೂ 1240ರಲ್ಲೂ ನಿಡುಮಾಮಿಡಿ ಕರಿಬಸವೇಂದ್ರ ಎಂಬ ಹೆಸರಿನಿಂದ ಅಲ್ಲಮ ಪ್ರಭುದೇವನ ಜೊತೆಯಲ್ಲಿ ಸಂಚರಿಸಿದಂತೆ ತಿಳಿದುಬಂದಿದೆ. ಈತ ಮಹಾಮಹಿಮನಾಗಿದ್ದು ಪೆನುಗೊಂಡ ತಾಲ್ಲೂಕು ನಿಡುಮಾಮಿಡಿ ಮಠ (ಶೈಲಪೀಠ ಶಾಖೆ) ಸ್ಥಾಪಕನೆಂದು ಖ್ಯಾತನಾಗಿದ್ದಾನೆ.		(ಎಂ.ಜಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ